Tuesday, November 17, 2009





ಪರಿಹಾರ

ಮನವು ಮಗುಚಿ ಬಿದ್ದು ಮಗುವಿನಂತೆ
ಹಠ ಮಾಡಿ ಅತ್ತು ಕರೆದಾಗ
ಮುದ್ದಿಸಿ ಸಂತೈಸುವ
ತಾಯಿಯೇ ಏಕಾಂತ...

Friday, November 13, 2009

ದುಃಖ
 


ನಾನು ಬರೆದ ಕವಿತೆಗಳು
ನನ್ನೊಂದಿಗೆ
ಕದನಕ್ಕಿಳಿಯುತ್ತವೆ
ಕನಲಿ
ಕಣ್ಣೀರಾಗುತ್ತವೆ
ನಾನು
ಅವುಗಳಲ್ಲಿ ತುಂಬುವ
ದುಃಖವನ್ನು
ಹೊತ್ತುಕೊಂಡು
ಕಾಗದದ
ಮೇಲೆ ನಿಲ್ಲಲಾಗುವುದಿಲ್ಲವೆಂದು.